ಕನ್ನಡ ಚಿತ್ರನಟ ಕುಣಿಗಲ್‍ ರಾಮನಾಥ್ ಅವರು ಕುಣಿಗಲ್‍ನವರು. ಅವರು ಡಾ. ರಾಜ್‍ಕುಮಾರ್ ಅವರಿಗೆ ಪರಮಾಪ್ತರಾಗಿದ್ದರು. ಅವರು ಕುಣಿಗಲ್‍ನಲ್ಲಿರುವ ದುರ್ಗಾಭವನ್ ಲಾಡ್ಜ್‍ನ ಮಾಲೀಕರು. == ಜನನ == ಕುಣಿಗಲ್‍ ರಾಮನಾಥ್ ಅವರು 1932ರ ಡಿಸೆಂಬರ್‍ನಲ್ಲಿ ಕೃಷ್ಣರಾವ್ ಹಾಗೂ ರಮಾಬಾಯಿ ದಂಪತಿಗಳ ಮಗನಾಗಿ ಜನಿಸಿದರು. == ಶಿಕ್ಷಣ == ಆಂಧ್ರಪ್ರದೇಶದ ಕಡಪಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. == ಸಾಂಸಾರಿಕ ಜೀವನ == ಕುಣಿಗಲ್‍ ರಾಮನಾಥ್ ಅವರು 19ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. == ಸೇವೆ == ಕುಣಿಗಲ್‍ ರಾಮನಾಥ್ ಅವರು 'ಸಂಪತ್ತಿಗೆ ಸವಾಲ್', 'ಹಾವಿನ ಹೆಡೆ', 'ಚಲಿಸುವ ಮೋಡಗಳು', 'ಸಮ್ಮಿಲನ', 'ತೂಗುವೆ ಕೃಷ್ಣನ', 'ಅನುರಾಗದ ಅಲೆಗಳು', 'ಪ್ರಾಣಸ್ನೇಹಿತ', 'ಸಪ್ತಪದಿ', 'ಕಿತ್ತೂರಿನ ಹುಲಿ' ಮುಂತಾದ ಸುಮಾರು 220ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. == ನಿಧನ == ಕುಣಿಗಲ್ ರಾಮನಾಥ್ ಅವರು ದಿನಾಂಕ 1-2-2016ರಂದು ಮಧ್ಯಾಹ್ನ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಒಬ್ಬ ಮಗ ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಅಂದೇ ಸಂಜೆ ಕುಣಿಗಲ್‍ನ ಬ್ರಾಹ್ಮಣ ರುದ್ರಭೂಮಿಯಲ್ಲಿ ನಡೆಯಿತು. == ಉಲ್ಲೇಖ ==